Sunday, July 26, 2009

ಚಿಂತೆಯೆಂಬ ಸಂತೆ

ಆಗಸದೆಡೆಗೆ ಮುಖ ಮಾಡಿದ ರೈತರಿಗೆ ಮಳೆಯ ಚಿಂತೆ
ಹೊಟ್ಟೆಯ ಮೇಲೆ ಬೀಳುವ ತಣ್ಣೀರ ಬಟ್ಟೆಯ ಚಿಂತೆ
ಬಿತ್ತನೆ ಮಾಡಲು ಹೊರಟ ರೈತರಿಗೆ ಗೊಬ್ಬರದ ಚಿಂತೆ
ಬೆನ್ನಿನ ಮೇಲೆ ಬೀಳುವ ಸರ್ಕಾರದ ಲಾಟಿ ಏಟಿನ ಚಿಂತೆ
ದಿನಸಿ ಕೊಳ್ಳುವ ಜನರಿಗೆ ಗಗನಕ್ಕೇರಿರುವ ಬೆಲೆಗಳ ಚಿಂತೆ
ಇಳಿಯುತ್ತಿರುವ ಕೋಟಿನ ಜೇಬುಗಳ ಭಾರದ ಚಿಂತೆ
ಸದನದಲ್ಲಿರುವ ನಾಯಕರಿಗೆ ಪರರ ಕಾಲೆಳೆಯುವ ಚಿಂತೆ
ಯಾರು ಸತ್ತರೇನು ನಾವು ಬದುಕಿದರೆ ಸಾಕೆನ್ನುವ ಚಿಂತೆ

No comments: