Saturday, July 11, 2009

ಬಕಾಸುರನೆಂಬ ನುಂಗಣ್ಣ!

ಆ ಮಹಾಭಾರತದಲ್ಲಿ ಇರುವನು ಒಬ್ಬ ಬಕಾಸುರನೆಂಬ ನುಂಗಣ್ಣನು
ಈ ಭಾರತದಲ್ಲಿ ಇರುವರು ಸಾವಿರಾರು ಬಕಾಸುರರೆಂಬ ನುಂಗಣ್ಣರು

ಆ ನುಂಗಣ್ಣನು ನುಂಗಲು ತೆರೆದರೆ ಒಂದೇ ಬಾಯಿ
ಈ ನುಂಗಣ್ಣರು ನುಂಗಲು ತೆರೆದರೆ ಮೈಯೆಲ್ಲ ಬಾಯಿ

ಆ ಬಕಾಸುರನಿಗೆ ನುಂಗಲು ಬೇಕು ಬಿಸಿ ಬಿಸಿಯಾದ ಖಾದ್ಯ ಭಕ್ಷ್ಯಗಳು
ಈ ಬಕಾಸುರರಿಗೆ ನುಂಗಲು ಬೇಕು ಗರಿ ಗರಿಯಾದ ನೋಟಿನ ಕಂತೆಗಳು

ಆ ಬಕಾಸುರನಿಂದ ಬರಿದಾದವು ಜನರ ಬೇಳೆ ಕಾಳುಗಳು
ಈ ಬಕಾಸುರರಿಂದ ಬರಿದಾದವು ಜನರ ಜೇಬುಗಳು

ಆ ಬಕಾಸುರನು ಹೀರಿದನು ದಿನಕ್ಕೆ ಒಬ್ಬನ ರಕ್ತ
ಈ ಬಕಾಸುರರು ಹೀರುವರು ದಿನಕ್ಕೆ ಸಹಸ್ರ ಜನರ ರಕ್ತ

ಆ ಬಕಾಸುರನನ್ನು ಸಂಹರಿಸಿದವು ಭೀಮನ ಎರಡು ಕೈಗಳು
ಈ ಬಕಾಸುರರನ್ನು ಸಂಹರಿಸಲು ಬೇಕು ಅಂತಹ ಸಹಸ್ರಾರು ಕೈಗಳು

ಆ ಮಹಾಭಾರತದ ಬಕಾಸುರನಿಗೆ ಇರಲಿಲ್ಲ ಯಾವ ರಕ್ಷಕರು
ಈ ಭಾರತದ ಬಕಾಸುರರಿಗೆ ಇದ್ದಾರೆ ಸರ್ಕಾರದ ತುಂಬ ರಕ್ಷಕರು

No comments: